ಗುರುವಾರ, ಆಗಸ್ಟ್ 27, 2009


ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...


ಮಳೆ ಹನಿ ಇಳೆಯನ್ನು ಒದ್ದೆ ಮುದ್ದೆ ಮಾಡಿದರೆ ಇಬ್ಬನಿ ನೀರ ಹನಿ ಚಿಮುಕಿಸಿ ವಸುಂಧರೆಯನ್ನ


ಪುಳಕಿತಗೊಳಿಸುತ್ತದೆ. ಆದರೆ ಈ ಎರಡೂ ನೀರ ಹನಿಗಳು ಪ್ರಕೃತಿಯಲ್ಲಿ ಮುತ್ತಿನ ತೋರಣವನ್ನೇ


ಕಟ್ಟುತ್ತವೆ. ಈ ಮುತ್ತುಗಳ ಆಯುಷ್ಯ ಅತ್ಯಲ್ಪವಾದರೂ ಅವುಗಳ ಸೌಂದರ್ಯ ಅನನ್ಯ! ನೇಸರನ


ನೋಟಕ್ಕೆ ನಾಚಿ ನೀರಾಗುವ ಈ ಮುತ್ತುಗಳನ್ನು ನೋಡುವುದೇ ಆನಂದ.


ಈ ಅತ್ಯಮೂಲ್ಯ ಮುತ್ತುಗಳನ್ನು ಕ್ಯಾಮೆರಾದಲ್ಲಿ ಮೊಗೆದು ಮುತ್ತಿನ ಹಾರ ಕಟ್ಟುವ ಪುಟ್ಟ


ಪ್ರಯತ್ನ ಇಲ್ಲಿದೆ...


ಮುತ್ತು ಮುತ್ತು ನೀರ ಹನಿಯ ಥೋಂ ಥ ಥನನಂ...




ಆಹಾ ಮುತ್ತಿನ ಹನಿಗಳೇ ಎತ್ತಣ ಹೊರಟಿರುವಿರಿ ಸಾಲು ಹಿಡಿದು...




ನೇಸರನ ನಿರೀಕ್ಷೆಯಲ್ಲಿರುವ ಚಿಗುರೆಲೆಗೆ ನೀರಹನಿಯ ಸಿಹಿ ಮುತ್ತುಗಳು..!?




ಇಬ್ಬನಿ ತಬ್ಬಿದ ಎಲೆಯಲಿ ರವಿತೇಜ ಕಣ್ಣ ತೆರೆದು...




ನೇಸರನ ಸ್ವಾಗತಕ್ಕೆ ಎಲೆಯ ತೋರಣ..ಇಬ್ಬನಿಯ ಓರಣ...




ಮೊಗ್ಗಿಗೆ ಇಬ್ಬನಿಯ ಸಿಹಿ ಚುಂಬನ....ಆಲಿಂಗನ...




ಚಿಗುರೆಲೆಯ ಬೆಳಗಿನ ಶೃಂಗಾರಕ್ಕೆ ಇಬ್ಬನಿಯ ಸಿಂಧೂರ...




ಜಾರಿ ಹೋಗದಿರು ಗೆಳೆಯಾ ಭೂರಮೆಯಲ್ಲಿ ಕರಗಿ ಬಿಟ್ಟೀಯಾ...




ಕಥೆ ಕಥೆ ಕಾರಣ...ಮುತ್ತಿನ ತೋರಣ....




ಹನಿ..ಹನಿ..ಇಬ್ಬನಿ ನಿನ್ನ ಬಾಚಿ ಕುಡಿಯೋ ಆಸೆ....




ಪ್ರಿಯತಮೇ ಕೇಳ ಬೇಡ ಈ ಮುತ್ತುಗಳನ್ನು ಸರದಲ್ಲಿ ಪೊಣಿಸಿ ಕೊಡು ಎಂದು...




ಬೆಲೆ ಕಟ್ಟಲಾಗದ ಈ ಮುತ್ತಿಗೆ ಮುಳ್ಳುಗಳ ರಕ್ಷಣೆ...




ಎಲೆಯಂಚಿನಲ್ಲಿ ಮಿನುಗುತ್ತಿರುವ ಪುಟ್ಟ ನೇಸರ...!?




ಇಬ್ಬನಿಯ ಮಳೆಯೇ ಏನು ನಿನ್ನ ಹನಿಗಳ ಲೀಲೆ....




ಜಾರಿ ಬೀಳುವ ಮೊದಲೇ ಸರದಲ್ಲಿ ಪೊಣಿಸಿಕೊಂಡು ಬಿಡಿ...!




ಜೇಡ, ಇಬ್ಬನಿ ಸೇರಿ ಮಾಡಿದ ಈ ನೆಕ್ಲೇಸ್ ನ ಬೆಲೆ ಎಷ್ಟೋ...!?





ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ....










8 ಕಾಮೆಂಟ್‌ಗಳು:

  1. ಗಣೇಶ್.....

    ನಿಮ್ಮ ಫೋಟೊಗಳು...
    ಅವುಗಳಿಗೆ ನಿಮ್ಮ ಒಕ್ಕಣಿಕೆ ಸುಂದರವಾಗಿದೆ....!

    ನಿಮ್ಮ ಬ್ಲಾಗ್ ಮೊದಲ ಭೇಟಿಯಲ್ಲೇ ಇಷ್ಟವಾಗಿ ಬಿಟ್ಟಿದೆ...

    ನಿಮ್ಮ ಬ್ಲಾಗಿಗೆ ಬಂದರೆ "ಶಿವು" ಬ್ಲಾಗ್‍ಗೆ ಬಂದ ಅನುಭವವಾಯ್ತು....

    ಅಭಿನಂದನೆಗಳು....

    ಪ್ರಕಾಶಣ್ಣ...

    ಪ್ರತ್ಯುತ್ತರಅಳಿಸಿ
  2. ವಾಹ್!!! ಒಂದಕ್ಕಿಂತ ಒಂದು ಮುಂಗಾರು ಮಳೆಯಲ್ಲಿ ಹನಿಗಳಾಗಿ ಮೂಡಿದ ಚಿತ್ರಗಳು, ಆ ಚಿತ್ರಕ್ಕೆ ತಕ್ಕಂತ ಹನಿಗಳ ಸಾಲುಗಳು ಮನಸ್ಸು ಹಾಗು ಕಣ್ಣನ್ನು ಕೋರೈಸುತ್ತವೆ..

    ಪ್ರತ್ಯುತ್ತರಅಳಿಸಿ
  3. ಅರೆರೆ...ಗಣೇಶ್,

    ಏನ್ರೀ ನೀವು ಫೋಟೋಗ್ರಾಫರ್ರಾ...ನನಗೆ ಗೊತ್ತೆ ಇರಲಿಲ್ಲ. ನಿಮ್ಮ ಬ್ಲಾಗಿನ ಹನಿಗಳು ತುಂಬಾ ಚೆನ್ನಾಗಿವೆ. ಫೋಟೋಗಳು ತಾಂತ್ರಿಕವಾಗಿ ಚೆನ್ನಾಗಿವೆ. ಅದಕ್ಕೆ ತಕ್ಕಂತೆ ಹಾಡಿನ ಸಾಲುಗಳನ್ನು ಪೋಣಿಸಿದ್ದೀರಿ.
    ನಿಮ್ಮ ಪರಿಚರವಾಗಿದ್ದು ಖುಷಿ.

    ಬಿಡುವಾದಾಗ ನನ್ನ ಬ್ಲಾಗಿನ ಮಳೆಹನಿಗಳನ್ನು ನೋಡಿ...

    ಪ್ರತ್ಯುತ್ತರಅಳಿಸಿ
  4. ಗಣೇಶ್,
    ಸೊಗಸಾದ ಫೋಟೋಗಳು..ಅದಕ್ಕೆ ತಕ್ಕ ಹಾಡುಗಳ ಒಕ್ಕಣಿ....
    ತುಂಬ ಇಷ್ಟವಾಯಿತು....
    ಅಭಿನಂದನೆಗಳು
    ಬಿಡುವಾದಾಗ ನನ್ನ ಬ್ಲಾಗಿಗೂ ಭೇಟಿ ಕೊಡಿ..
    ಮಹೇಶ್!

    ಪ್ರತ್ಯುತ್ತರಅಳಿಸಿ
  5. ಗಣೇಶ್,
    ತುಂಬಾ ತುಂಬಾ ಚೆನ್ನಾಗಿವೆ ನಿಮ್ಮ ಚಿತ್ರಗಳು. ಒಂದಕ್ಕಿಂದ ಒಂದು ಚಂದವಿದೆ. ಅದಕ್ಕೆ ಜೊತೆಗೂಡಿರುವ ಸಾಲುಗಳು ಕೂಡ ಅಷ್ಟೇ ಸೊಗಸಾಗಿವೆ.

    ಪ್ರತ್ಯುತ್ತರಅಳಿಸಿ
  6. ganeshanna,nimma blog oodi tumba santoshavayitu,sumdara chitragalu mattu hadina moolaka kotta barahagalu...........

    ಪ್ರತ್ಯುತ್ತರಅಳಿಸಿ
  7. ಗಣೇಶ್ ಅವರೆ, ಮುತ್ತಿನ ಹನಿಗಳ ಚಿತ್ರಗಳು ನಿಜಕ್ಕೂ ಅತಿ ಸುಂದರವಾಗಿವೆ. ನಿಮ್ಮ ವ್ಯಂಗಚಿತ್ರಗಳನ್ನು ಪತ್ರಿಕೆಗಳಲ್ಲಿ ನೋಡುತ್ತಿರುತ್ತೇನೆ.

    ಪ್ರತ್ಯುತ್ತರಅಳಿಸಿ