ಗುರುವಾರ, ಆಗಸ್ಟ್ 27, 2009


ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ...


ಮಳೆ ಹನಿ ಇಳೆಯನ್ನು ಒದ್ದೆ ಮುದ್ದೆ ಮಾಡಿದರೆ ಇಬ್ಬನಿ ನೀರ ಹನಿ ಚಿಮುಕಿಸಿ ವಸುಂಧರೆಯನ್ನ


ಪುಳಕಿತಗೊಳಿಸುತ್ತದೆ. ಆದರೆ ಈ ಎರಡೂ ನೀರ ಹನಿಗಳು ಪ್ರಕೃತಿಯಲ್ಲಿ ಮುತ್ತಿನ ತೋರಣವನ್ನೇ


ಕಟ್ಟುತ್ತವೆ. ಈ ಮುತ್ತುಗಳ ಆಯುಷ್ಯ ಅತ್ಯಲ್ಪವಾದರೂ ಅವುಗಳ ಸೌಂದರ್ಯ ಅನನ್ಯ! ನೇಸರನ


ನೋಟಕ್ಕೆ ನಾಚಿ ನೀರಾಗುವ ಈ ಮುತ್ತುಗಳನ್ನು ನೋಡುವುದೇ ಆನಂದ.


ಈ ಅತ್ಯಮೂಲ್ಯ ಮುತ್ತುಗಳನ್ನು ಕ್ಯಾಮೆರಾದಲ್ಲಿ ಮೊಗೆದು ಮುತ್ತಿನ ಹಾರ ಕಟ್ಟುವ ಪುಟ್ಟ


ಪ್ರಯತ್ನ ಇಲ್ಲಿದೆ...


ಮುತ್ತು ಮುತ್ತು ನೀರ ಹನಿಯ ಥೋಂ ಥ ಥನನಂ...
ಆಹಾ ಮುತ್ತಿನ ಹನಿಗಳೇ ಎತ್ತಣ ಹೊರಟಿರುವಿರಿ ಸಾಲು ಹಿಡಿದು...
ನೇಸರನ ನಿರೀಕ್ಷೆಯಲ್ಲಿರುವ ಚಿಗುರೆಲೆಗೆ ನೀರಹನಿಯ ಸಿಹಿ ಮುತ್ತುಗಳು..!?
ಇಬ್ಬನಿ ತಬ್ಬಿದ ಎಲೆಯಲಿ ರವಿತೇಜ ಕಣ್ಣ ತೆರೆದು...
ನೇಸರನ ಸ್ವಾಗತಕ್ಕೆ ಎಲೆಯ ತೋರಣ..ಇಬ್ಬನಿಯ ಓರಣ...
ಮೊಗ್ಗಿಗೆ ಇಬ್ಬನಿಯ ಸಿಹಿ ಚುಂಬನ....ಆಲಿಂಗನ...
ಚಿಗುರೆಲೆಯ ಬೆಳಗಿನ ಶೃಂಗಾರಕ್ಕೆ ಇಬ್ಬನಿಯ ಸಿಂಧೂರ...
ಜಾರಿ ಹೋಗದಿರು ಗೆಳೆಯಾ ಭೂರಮೆಯಲ್ಲಿ ಕರಗಿ ಬಿಟ್ಟೀಯಾ...
ಕಥೆ ಕಥೆ ಕಾರಣ...ಮುತ್ತಿನ ತೋರಣ....
ಹನಿ..ಹನಿ..ಇಬ್ಬನಿ ನಿನ್ನ ಬಾಚಿ ಕುಡಿಯೋ ಆಸೆ....
ಪ್ರಿಯತಮೇ ಕೇಳ ಬೇಡ ಈ ಮುತ್ತುಗಳನ್ನು ಸರದಲ್ಲಿ ಪೊಣಿಸಿ ಕೊಡು ಎಂದು...
ಬೆಲೆ ಕಟ್ಟಲಾಗದ ಈ ಮುತ್ತಿಗೆ ಮುಳ್ಳುಗಳ ರಕ್ಷಣೆ...
ಎಲೆಯಂಚಿನಲ್ಲಿ ಮಿನುಗುತ್ತಿರುವ ಪುಟ್ಟ ನೇಸರ...!?
ಇಬ್ಬನಿಯ ಮಳೆಯೇ ಏನು ನಿನ್ನ ಹನಿಗಳ ಲೀಲೆ....
ಜಾರಿ ಬೀಳುವ ಮೊದಲೇ ಸರದಲ್ಲಿ ಪೊಣಿಸಿಕೊಂಡು ಬಿಡಿ...!
ಜೇಡ, ಇಬ್ಬನಿ ಸೇರಿ ಮಾಡಿದ ಈ ನೆಕ್ಲೇಸ್ ನ ಬೆಲೆ ಎಷ್ಟೋ...!?

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ....