ಶುಕ್ರವಾರ, ಸೆಪ್ಟೆಂಬರ್ 11, 2009ಹೂ ಹಕ್ಕಿಯ ಮಧುಪಾನ....ಗುಬ್ಬಚ್ಚಿಗಿಂತಲೂ ಚಿಕ್ಕದಾದ ಹೂ ಹಕ್ಕಿಗಳು (sun bird) ಹೂವಿನ ಮೇಲೆ ಕುಳಿತು ರಸ ಹೀರುವುದು ತುಂಬಾ ಆಕರ್ಷಕ. ನೀಲಿ ಬೆನ್ನಿನ ಹೂ ಹಕ್ಕಿ ಜೋಡಿಯೊಂದು ರಸ ಹೀರುವಾಗ ಕ್ಯಾಮೆರಾದಲ್ಲಿಸೆರೆಯಾದವು. ಸೆರೆ ಸಿಕ್ಕ ಆ ಹಕ್ಕಿಗಳು ಇಲ್ಲಿವೆ...ನೋಡಿ ಒಮ್ಮೆ...

ಗಂಡು ಹೂ ಹಕ್ಕಿಹೆಣ್ಣು ಹೂ ಹಕ್ಕಿಆಹಾ.. ಎಷ್ಟು ರುಚಿಯಾಗಿದೆ ಈ ಹೂವಿನ ರಸ..ಈ ಹೂವಿನ ರುಚಿ ನೋಡೋಣ ಅಂದ್ರೆ ಈ ಕೊಂಬೆ ನನ್ನ ಭಾರಾನೇ ತಡ್ಕೊಳಲ್ಲಾ ಅನ್ನುತ್ತಲ್ರೀ...ಛೆ..ಏನ್ ಗಾಳೀನೋ..ಆರಾಮವಾಗಿ ಜ್ಯೂಸ್ ಕುಡಿಯೋಕೂ ಬಿಡಲ್ಲ..ಲೋ..ಯಾರೋ ನಿನ್ನ ಫೋಟೋ ತೆಗೀತಿದಾರೆ ಕಣೋ..ಯಾವನ್ಲಾ ಅವ್ನು ನನ್ನ್ನ ಫೋಟೋ ತೆಗಿಯೋನು...ತೆಕ್ಕೊಳ್ಳಿ ಬಿಡೇ..ನಮ್ಮ ಪಾಡಿಗೆ ನಾವು ಜ್ಯೂಸ್ ಕುಡಿಯೋಣ..ಈ ಹೂವಿನ ಟೇಸ್ಟ್ ತುಂಬಾ ಚೆನ್ನಾಗಿದೆ ಕಣೋ..ನಿನಗೆ ಹೀಗೆ ಕುಳಿತು ರಸ ಹೀರೋಕೆ ಬರುತ್ತೇನೇ..!?ಯಾಕೋ ಬರಲ್ಲಾ..ನಾನು ನಿನಗಿಂತ ಯಾವುದ್ರಲ್ಲೂ ಕಡೆಮೆ ಇಲ್ಲ ತಿಳೀತಾ...ಲೇ..ಹೊರಟೇ ಬಿಟ್ಯೇನೇ..ನಾನೂ ಬರ್ತೀನಿ ತಡಿಯೇ...

6 ಕಾಮೆಂಟ್‌ಗಳು:

 1. ವಾಹ್...!

  ಸೊಗಸಾದ ಫೋಟೊಗಳು...!

  ಆ ಪುಟ್ಟ ಹಕ್ಕಿಯನ್ನು ಹಿಡಿದುಕೊಂಡು..
  ಮುದ್ದುಮಾಡಬೇಕೆಂದು ಅನ್ನಿಸಿ ಬಿಡ್ತು...

  ಅದಕ್ಕೆ ತಕ್ಕ ಸುಂದರ ಒಕ್ಕಣಿಕೆ...!
  ಖುಷಿಯಾಯಿತು...

  ಗಣೇಶ್ ಆಭಿನಂದನೆಗಳು....

  ಪ್ರತ್ಯುತ್ತರಅಳಿಸಿ
 2. ಗಣೇಶ್,
  ಅಧ್ಬುತವಾಗಿ ಸೆರೆ ಹಿಡಿದ ಫೋಟೊಗಳು...
  ಅದಕ್ಕೆ ತಕ್ಕ ಒಕ್ಕಣಿ...
  ಬಹಳ ಚೆನ್ನಾಗಿದೆ...

  ಪ್ರತ್ಯುತ್ತರಅಳಿಸಿ
 3. ಗಣೇಶ್,

  ಹೂಹಕ್ಕಿಗಳ ಫೋಟೋಗಳು ತುಂಬಾ ಚೆನ್ನಾಗಿವೆ. ಅದಕ್ಕೆ ತಕ್ಕಂತೆ ಅವುಗಳ ಸಂಭಾಷಣೆಗಳು ತುಂಬಾ ಚೆನ್ನಾಗಿವೆ...

  ಪ್ರತ್ಯುತ್ತರಅಳಿಸಿ
 4. ಬರೀದೆ ಸುಮಾರು ದಿನ ಆದಾಂಗೆ ಕಾಣಿಸ್ತು, ಬರೀ ಮಾರಾಯ!

  ಪ್ರತ್ಯುತ್ತರಅಳಿಸಿ
 5. ತುಂಬಾ ಉತ್ತಮ ದೃಶ್ಯಗಳು... ಇಂಥ ಕ್ಷಣಗಳನ್ನ ಸೆರೆಹಿಡಿಯೋದಕ್ಕೆ ಅದೆಷ್ಟು ತಾಳ್ಮೆ, ಏಕಾಗ್ರತೆ ಬೇಕಾಗಬಹುದು ಅಂತ ಲೆಕ್ಕ ಹಾಕ್ತಿದ್ದೇನೆ. ಅಂದ ಹಾಗೆ ನಿಮ್ಮ ಬ್ಲಾಗ್ ಫಾಲ್ಲೋ ಮಾಡೋದು ಹೇಗೆ? ಇದರ ಟೆಂಪ್ಲೇಟ್ ಇದ್ರೆ ಚೆನ್ನಾಗಿತ್ತು. NAV bar ಇದ್ದರೂ ಸಾಕಿತ್ತು ಫಾಲ್ಲೋ ಮಾಡ್ಲಿಕ್ಕೆ.

  ಪ್ರತ್ಯುತ್ತರಅಳಿಸಿ