ಶನಿವಾರ, ಮೇ 16, 2009



Explore your hobbies and interests. Click here to begin.

ಶುಕ್ರವಾರ, ಮೇ 15, 2009



Explore and discover exciting holidays and getaways with Yahoo! India Travel Click here!

ಮಂಗಳವಾರ, ಏಪ್ರಿಲ್ 7, 2009



Add more friends to your messenger and enjoy! Invite them now.



Check out the all-new Messenger 9.0! Click here.

ಭಾನುವಾರ, ಮಾರ್ಚ್ 22, 2009




ಸೂರ್ಯಾಸ್ತ ನೋಡಿ ಒಮ್ಮೆ ಕೈಲಾಸ ಗುಡ್ಡದಿಂದ...
ಉತ್ತರಕನ್ನಡ ಜಿಲ್ಲೆಯನ್ನು ನಿಸರ್ಗಸೌಂದರ್ಯ ಆರಾಧಾಕರ ಸ್ವರ್ಗ್ಸ ಎಂದೇ ಹೆಳಬಹುದು. ಇಲ್ಲಿ ಹೆಜ್ಜೆ ಹೆಜ್ಜೆಗೊಂದು
ಜಲಪಾತ ಹಾಗೂ ಸಣ್ಣ ಸಣ್ಣ ಗಿರಿಧಾಮಗಳು ಸಿಗುತ್ತವೆ. ಒಂದನ್ನೊಂದು ಮೀರಿಸುವಂತಹ ಸೌಂದ್ರರ್ಯ ಅವುಗಳದು.
ಶಿರಸಿ ತಾಲೂಕಿನ ತಾರಗೋಡ ಸಮೀಪದ ಕೈಲಾಸ ಗುಡ್ಡವೂ ಅಂತಹ ಗಿರಿಧಾಮಗಳಲ್ಲಿ ಒಂದು.
ಈ ಗುಡ್ಡದ ಮೇಲಿರುವ ಒಂದು ಕಲ್ಲಿನ ಮೇಲೆ ಒಂದು ಶಿವಲಿಂಗದ ಕೆತ್ತನೆಯಿದೆ. ಹಾಗಾಗಿ ಈ ಗುಡ್ಡಕ್ಕೆ ಕೈಲಾ
ಸ ಗುಡ್ಡ ಎಂದು ಹೆಸರು. ಅನಾದಿ ಕಾಲದಲ್ಲಿ ಯಾರೋ ಅನಾಮಿಕ ಕೆತ್ತಿದ ಶಿವಲಿಂಗವಿದು. ಈ ಶಿವನ ಪಕ್ಕದಲ್ಲೇ ಬಾ
ವಿಯ ಕುರುಹೂ ಇದೆ. ಈ ಶಿವನಿಗೆ ನಿತ್ಯ ಪೂಜೆ ಇಲ್ಲವಾದರೂ ಶಿವರಾತ್ರಿಯಂದು ಸ್ಥಳೀಯರು ಇಲ್ಲಿ ಪೂಜೆ ಸಲ್ಲಿಸು
ತ್ತಾರೆ. ಆ ದಿನ ತಕ್ಕ ಮಟ್ಟಿಗೆ ಪ್ರವಾಸಿಗರೂ ಕೈಲಾಸ ಗುಡ್ಡಕ್ಕೆ ಬಂದು ಶಿವನ ದರ್ಶನ ಪಡೆಯುತ್ತಾರೆ. ಈ ಶಿವಲಿಂಗ
ಕ್ಕೆ ಬಿಸಿಲು, ಗಾಳಿ, ಮಳೆಯಿಂದ ರಕ್ಷಣೆಯಿಲ್ಲವಾದರಿಂದ ಶಿಥಿಲಾವಸ್ಥೆಯಲ್ಲಿದೆ.


ಕೈಲಾಸ ಗುಡ್ಡ ಸಮುದ್ರ ಮಟ್ಟದಿಂದ 674 ಮೀಟರ್ ಎತ್ತರದಲ್ಲಿದೆ. ಇಲ್ಲಿಂದ ಸುತ್ತಲಿನ ಬೆಟ್ಟ ಗುಡ್ಡ, ಕಾಡು ಹಾ
ಗೂ ಅಡಿಕೆ ತೋಟ ಮನಮೋಹಕವಾಗಿ ಕಾಣಿಸುತ್ತದೆ. ಇಲ್ಲಿನ ಸೂರ್ಯಾಸ್ತದ ಸವಿಯನ್ನಂತೂ ಬಣ್ಣಿಸಲಸಾಧ್ಯ.
ಸೂರ್ಯಾಸ್ತದ ವೇಳೆ ಗುಡ್ಡದ ತುಂಬೆಲ್ಲಾ ಆವರಿಸುವ ಹೊಂಬೆಳಕು ವಿಶಿಷ್ಟ ಅನುಭವವನ್ನು ನೀಡುತ್ತದೆ.
ಸುತ್ತಲಿನ ದೃಶ್ಯ ಹೂಗೂ ಸೂರ್ಯಾಸ್ತ ವೀಕ್ಷಣೆಗೆ ಅರಣ್ಯ ಇಲಾಖೆಯವರು ವೀಕ್ಷಣಾ ಗೋಪುರ ನಿರ್ಮಿಸಿದ್ದರೂ
ಅದೀಗ ಶಿಥಿಲಾವಸ್ಥೆಯಲ್ಲಿದೆ.

ದೂರವಾಣಿ ಇಲಾಖೆಯ ಮೈಕ್ರೋವೇವ್ ಸ್ಟೇಶನ್ (ಈಗ ಮೊಬೈಲ್ ಸ್ಟೇಶನ್) ಇಲ್ಲಿರುವದರಿಂದ ಗುಡ್ಡದ
ತುದಿಯವರೆಗೂ ವಾಹನ ಹೋಗುವಂತಹ ರಸ್ತೆಯಿದೆ. ಈ ರಸ್ತೆಯಿಂದಾಗಿಯೇ ಕೈಲಾಸ ಗುಡ್ಡದಲ್ಲಿನ ಅತ್ಯಮೂಲ್ಯ
ಬೆಲೆ ಬಾಳುವ ಮರಗಳ ಲೂಟಿಯಾಯಿತೆಂದು ಹೇಲಬಹುದು.
ಶಿರಸಿ ಯಲ್ಲಪುರ ರಸ್ತೆಯಲ್ಲಿನ ಭೈರುಂಬೆಗಿಂತ 1.5 ಕಿ.ಮಿ.ಗೆ ಮೊದಲು ಬರುವ ಕಚ್ಚಾ ರಸ್ತೆಯಲ್ಲಿ ಮೂರು ಕಿ.
ಮಿ. ಸಾಗಿದರೆ ಗುಡ್ಡದ ತುದಿ ತಲುಪಬಹುದು. ಕಾಲ್ನಡಿಗೆಯಲ್ಲಿ ಹೋಗ ಬಯಸುವವರು ತಾರಗೋಡ್ ತುದಿ ಮನೆ
ಮಾರ್ಗ ಅಥವಾ ಗುಡ್ಡದ ಬುಡದಲ್ಲಿರುವ ಕಾಳೀಸರದ ಮಾರ್ಗವಾಗಿ ಚಾರಣದ ಮೂಲಕವೂ ಗುಡ್ಡ ಏರಬಹುದು.
ಮೊಲ, ನವಿಲು, ಕಾಡುಕೋಳಿ ಹಾಗೂ ಒಮ್ಮೊಮ್ಮೆ ಜಿಂಕೆ ಹಿಂಡಿನ ದರ್ಶನವೂ ಕಾಲ್ನಡಿಗೆ ಮಾರ್ಗದಲ್ಲಿ ಆಗುತ್ತ
ದೆ. ಕರುನಾಡಿನ ಅತ್ಯಮೂಲ್ಯ ಶ್ರೀಗಂಧ ಹಾಗೂ ಔಷಧಿ ಸಸ್ಯಗಳು ಇಲ್ಲಿ ಹೇರಳವಾಗಿವೆ. ಆದರೆ ಇಲ್ಲಿನ ಶ್ರೀ ಗಂ
ಧ ಕಳ್ಳರ ಕೊಡಲಿಗೆ ಬಲಿಯಾಗಿ ಗುಡ್ಡ ಬರಿದಾಗುತ್ತಿದೆ. ಶಿರಸಿಗೆ ಬಂದಾಗ ಕೈಲಾಸ ಗುಡ್ಡದ ಸೂರ್ಯಾಸ್ತ ನೋಡ
ಲು ಮುದ್ದಾಂ ಬನ್ನಿ.

ಬುಧವಾರ, ಮಾರ್ಚ್ 18, 2009

ಚಿಗುರೆಲೆ...ಈಗ ತಾನೇ ಬ್ಲಾಗ್ ಬರೆಯಲು ಶುರು ಮಾಡಿರೋ ನನ್ನ ಬ್ಲಾಗ್ ಗೆ ಈ ಹೆಸರೇ ಸೂಕ್ತ ಅನ್ನಿಸ್ತು. ತೋಚಿದ್ದನ್ನ ಗೀಚೋಣ ಅಂದ್ಕೊಂಡಿದೀನಿ ಈ ಬ್ಲಾಗಿನಲ್ಲಿ. ಫೋಟೋಗಳ ಜೊತೆ ವ್ಯಂಗ್ಯಚಿತ್ರಗಳನ್ನೂ ಸೇರಿಸ್ಬೇಕು ಅಂದ್ಕೊಂಡಿದೀನಿ.
ಬ್ಲಾಗ್ ನಲ್ಲಿ ಅ ಆ ಬರೆಯಲು ಪ್ರಾರಂಭಿಸಿರೋ ನನ್ನನ್ನು ಕಿವಿ ಹಿಂಡಿ ತಿದ್ದೋ ಕೆಲಸ ನಿಮ್ಮದು. ಉರಿಯಾಗದ ಹಾಗೆ ಕಿವಿ
ಹಿಂಡ್ತೀರಲ್ಲಾ...